Wednesday, November 22, 2017

ಪ್ರೇಮ, ವಿರಹ, ವೈರಾಗ್ಯದ ತಿರುಗಣೆ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 22.11.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

sunaath said...

ಬದುಕಿನ ತಿರುಗಣಿಯನ್ನು ತಿರುಗುವ ತಿಗರಿಯಲ್ಲಿ ರೂಪಿಸಿ ನಿರೂಪಿಸಿದ್ದೀರಿ. ನಿಮ್ಮಿಂದ ನಿಯತವಾಗಿ ಅನೇಕ ಓದುಗರಿಗೆ reading pleasure ಸಿಕ್ಕುತ್ತಿದೆ; ಧನ್ಯವಾದಗಳು. ನನಗೆ ಸಂಸ್ಕೃತ ಬಾರದು. ಆದರೂ ಸಹ ನೀವು ಸೂಚಿಸಿದ ಭರ್ತೃಹರಿಯ ಪ್ರಸಿದ್ಧ ಶ್ಲೋಕದ ಕೊನೆಯ ಸಾಲೊಂದು ನೆನಪಿನಲ್ಲಿದೆ:
‘ಧಿಕ್ ತಾಮ್ ಚ, ತಮ್ ಚ, ಮದನಮ್ ಚ, ಇಮಾಮ್ ಚ, ಮಾಮ್ ಚ!’ ನೆನಪಿಗೆ ಕಾರಣರಾದ ನಿಮಗೆ ವಂದನೆಗಳು.

onthetrailof said...

ಈ ಸಲದ ನಿಮ್ಮ ಕಾಲಂನಲ್ಲಿ ತಿರುಗಣೆಯ ರೂಪಕ ಒಂದರ ನಂತರ ಇನ್ನೊಂದರಂತೆ ಮುಖ ತೋರುವ ಸೂಚ್ಯವಲ್ಲದೆ full - cycle ಅನ್ನುವ ರೀತಿಯಲ್ಲೂ ಮೂಡಿಬರುತ್ತದೆ. ನೀತಿ-ಪ್ರೀತಿ, ಪ್ರೇಮ-ಕಾಮ, ಎಲ್ಲವೂ ನಾಣ್ಯದ ಬೇರೆ ಬೇರೆ ಮುಖಗಳಿದ್ದಂತೆ. ಹಾಗಾಗಿ ಈ ತಿರುಗಣೆ ಒಂದರ ನಂತರ ಇನ್ನೊಂದರಂತೆ ತನ್ನ ಮುಖ ತೋರುವ ಸ್ವಭಾವೋ ಅಥವಾ ಒಂದು full - circle ಬಂದು ನಿಂತ ಮನುಷ್ಯರ ಮನಃಸ್ಥಿತಿಯೋ? ಹೀಗೆ ಪ್ರಶ್ನಿಸಿಕೊಳ್ಳುತಿರುವಾಗಲೇ ಅತ್ಯಂತ ಸೂಕ್ಷ್ಮ- ಸುಂದರ ಹೈಕುವನ್ನು ನೀಡಿ ಜೀವನ ಪ್ರೀತಿಯ ಮಜಲುಗಳಾದ ಪ್ರೀತಿ, ಪ್ರೇಮ, ಕಾಮ, ವೈರಾಗ್ಯಗಳ ಸುತ್ತ ಮನಸ್ಸು ಗಿರಕಿ ಹೊಡೆಯುವಂತೆ ಮಾಡುತ್ತದೆ.

ದೀಪಾ ಜೋಶಿ said...

ತಿರುಗಣೀ ಬಾಗಲದಾಗ ಸಿಕ್ಕು ಗಿರಗಿಟ್ಲೀ ಆಡೋ ಭಾವನೆಗಳನ್ನು ಭಾಳ ಚಂದಾಗಿ ಚಿತ್ರಿಸೀರೀ. ಕಳ್ಳೇಮಳ್ಳೇ ಕಪಾಟಮಳ್ಳೇ ಅಂತ ಅಪಭ್ರಂಶವನ್ನ ಹಾಡಕೋತ ಪರಕಾರ ಬುಟ್ಟಿ ಮಾಡಿಕೊಂಡು ಕೂತಗೋತಿದ್ದ ಬಾಲ್ಯದ ಅಂಗಳಕ್ಕ ಕರಕೊಂಡು ಹೋದ್ರಿ

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಜ, ನೀವು ಉದ್ಧರಿಸಿದ ಸಂಸ್ಕೃತ ಶ್ಲೋಕರೂಪದ ಮಾತು ಭರ್ತೃಹರಿಯ ಸುಪ್ರಸಿದ್ಧ ಹೇಳಿಕೆಯೇ ಆಗಿದೆ. ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಪ್ರಿಯ on the trail of,
ನೀವು ಇಡೀ ಲೇಖನವನ್ನು ಸೂಕ್ಷ್ಮವಾಗಿ ಗಮನಿಸಿ ಕ್ಪಕಿರಣ ಬೀರಿದ್ದು ಖುಷಿಯೆನಿಸಿತು. ಹೌದು, ಪ್ರೇಮ-ವಿರಹ-ವೈರಾಗ್ಯಗಳನ್ನು ನಾನಿಲ್ಲಿ ಎರಡು ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ್ದೇನೆ.
೧. ಒಂದರ ನಂತರ ಮತ್ತೊಂದು ಸರದಿಯಂತೆ ಬಂದು ಹೋಗುವ ಸರಪಳಿಯಂತೆ.
೨. ಒಂದರ ನಂತರ ಮತ್ತೊಂದು ಸರದಿಯ ಪ್ರಕಾರ ಬಂದುಹೋಗುತ್ತಲೇ ಇರುವ ತಿರುಗಣಿಯಂತೆ.

ಯಾಕೆಂದರೆ, ಇವೆರಡೂ ಪ್ರಕಾರದ ಅನುಭವಗಳನ್ನು ಮನಗಂಡ, ಮನಗಾಣುತ್ತಿರುವ ಮನಸ್ಥಿತಿ ಈ ಲೋಕದಲ್ಲಿ ಸಾಕಷ್ಟಿವೆ. ಅಂತೆಯೇ, ಇವೆಲ್ಲ ಭಾವಗಳು ಒಬ್ಬರಲ್ಲಿ ಸರಪಳಿಯಂತೆ ಬಂದು ಸ್ಥಾವರಗೊಳ್ಳುವ ಪ್ರಕ್ರಿಯೆಯಂತೆ ಕಂಡರೆ, ಮತ್ತೊಬ್ಬರಿಗೆ ಇವೇ ಭಾವಗಳು ಒಂದಾದ ಮೇಲೊಂದು ಬಂದುಹೋಗುವ, ಆ ಮೂಲಕ ಅದು ಜಂಗಮವಾಗುವ ಸಾಧ್ಯತೆಗಳೂ ಇವೆ. ಹೀಗಾಗಿ, ಎರಡೂ ರೀತಿಯಲ್ಲಿ ಇದನ್ನು ಬಿಂಬಿಸುವದು ನನಗೆ ಅವಶ್ಯಕವೆನಿಸಿತು.
ಮತ್ತೊಮ್ಮೆ, ನಿಮ್ಮ ಸೂಕ್ಷ್ಮ ಅವಗಾಹನೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ಹೌದು, ಬಾಲ್ಯದಲ್ಲಿ ನಾವೆಲ್ಲ 'ಕಳ್ಳೇ ಮಳ್ಳೇ ಕಪಾಟ ಮಳ್ಳೇ..' ಅಂತಲೇ ಹಾಡುತ್ತಿದ್ದುದು. ಸದರಿ ಲೇಖನವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಬಾಲ್ಯದ ಹಾಡಿನಲ್ಲಿ ಯಾಕೋ dots ಕನೆಕ್ಟ್ ಆಗುತ್ತಿಲ್ಲವಲ್ಲ ಅಂತ ಯೋಚಿಸಿದಾಗ ಈ ಅಪಭ್ರಂಶ ಕಂಡುಬಂತು.
ನೀವದನ್ನು ಸರಿಯಾಗಿ ಗುರುತಿಸಿದ್ದೀರಿ.
ಧನ್ಯವಾದಗಳು